ಒಂದು ಕ್ಷಣದ ಸಂಯಮ

ಇದೊಂದು ಸುಂದರವಾದ ಪಂಚ­ತಂತ್ರದ ಕಥೆ.

ಜೀರ್ಣಧನನ ವ್ಯಾಪಾರ ಚೆನ್ನಾಗಿ ನಡೆಯುತ್ತಿರಲಿಲ್ಲ. ಆತ ಏನೆಲ್ಲಾ ಪ್ರಯತ್ನ ಮಾಡಿದರೂ ವ್ಯಾಪಾರ ಮುಂದು­ವರೆಯುವಂತೆ ಕಾಣಲಿಲ್ಲ. ನಿರಾಶನಾಗಿ ಆತ ವ್ಯಾಪಾರ­ವನ್ನು ಮುಚ್ಚಿಬಿಟ್ಟು ಪಟ್ಟಣಕ್ಕೆ ಹೋಗಿ ಯಾವುದೋ ಕೆಲಸವನ್ನು ಮಾಡಿ ಬದುಕು ಸಾಗಿಸುವುದೆಂದು ಯೋಚಿ­ಸಿದ. ತನ್ನಲ್ಲಿದ್ದ ಎಲ್ಲ ಸಾಮಾನು­ಗಳನ್ನು ಮಾರಿಬಿಟ್ಟರೂ ತಲೆತಲಾಂತರದಿಂದ ತನಗೆ ಬಂದ ಕಬ್ಬಿಣದ ತಕ್ಕಡಿ­ಯನ್ನು ಮಾರುವ ಮನಸ್ಸಾಗಲಿಲ್ಲ.

ತನ್ನ ಹಿರಿಯರು ಪ್ರೀತಿಯಿಂದ ಉಳಿಸಿ­ಕೊಂಡಿದ್ದ ತಕ್ಕಡಿಯನ್ನು ಮಾರಬಾರ­ದೆಂದು ನಿರ್ಧರಿಸಿ ತನ್ನ ಸ್ನೇಹಿತನ ಬಳಿಗೆ ಹೋಗಿ ತಾನು ಮರಳಿ ಬರುವವರೆಗೆ ಅದನ್ನು ಮನೆಯಲ್ಲಿ ಇಟ್ಟುಕೊಳ್ಳ­ಬಹುದೇ ಎಂದು ಕೇಳಿದ. ಸ್ನೇಹಿತ ಅದಕ್ಕೆ ಒಪ್ಪಿ ಅದನ್ನು ತೆಗೆದುಕೊಂಡ. ಜೀರ್ಣಧನ ಪಟ್ಟ­ಣಕ್ಕೆ ಹೋದ.

ಎರಡು ವರ್ಷಗಳ ನಂತರ ಸ್ವಲ್ಪ ಹಣ ಸಂಪಾದಿಸಿಕೊಂಡು ಬಂದ ಜೀರ್ಣ­ಧನ ಸ್ನೇಹಿತನ ಮನೆಗೆ ಹೋಗಿ ತನ್ನ ಕಬ್ಬಿಣದ ತಕ್ಕಡಿಯನ್ನು ಕೇಳಿದ. ಆಗ ಸ್ನೇಹಿತ ತುಂಬ ದುಃಖದಿಂದ ಹೇಳಿದ, ‘ಗೆಳೆಯಾ, ಏನು ಹೇಳಲಿ? ನೀನು ಕೊಟ್ಟ ತಕ್ಕಡಿ­ಯನ್ನು ಅಟ್ಟದ ಮೇಲೆ ಜೋಪಾನವಾಗಿ ಇಟ್ಟಿದ್ದೆ. ಆದರೆ ಮೊನ್ನೆ ಮೇಲೆ ಹೋಗಿ ನೋಡಿದರೆ ಇಡೀ ತಕ್ಕಡಿಯನ್ನು ಇಲಿಗಳು ತಿಂದು ಹಾಕಿವೆ. ಒಂದು ಚೂರನ್ನೂ ಉಳಿಸಿಲ್ಲ’. ಜೀರ್ಣಧನನಿಗೆ ಆಘಾತವಾಯಿತು.

ಇದು ಸ್ನೇಹಿತ ತನಗೆ ಮಾಡಿದ ಮೋಸ­ವೆಂದು ಕ್ಷಣದಲ್ಲಿಯೇ ತಿಳಿಯಿತು. ಆತ ಅವನೊಡನೆ ಜಗಳ­ವಾಡ­ಲಿಲ್ಲ, ಕೋಪ­ದಿಂದ ಹಾರಾಡಲಿಲ್ಲ. ಶಾಂತವಾಗಿಯೇ ಹೇಳಿದ, ‘ಹೌದಪ್ಪ, ಕೆಲ­ವೊಮ್ಮೆ ಹಾಗೆ ಆಗಿಬಿಡುತ್ತದೆ, ಏನು ಮಾಡುವುದು? ಜೀವನವೇ ಹಾಗೆ, ಯಾವುದೂ ಶಾಶ್ವತವಲ್ಲ’. ಅನಂತರ ಉಭಯ ಕುಶ­ಲೋಪರಿಯ ಮಾತು­ಗಳನ್ನಾಡಿ ಮನೆಗೆ ಹೋದ.

ಹತ್ತು ದಿನಗಳ ನಂತರ ಜೀರ್ಣಧನ ಹತ್ತಿರದ ದೇವಸ್ಥಾನಕ್ಕೆ ಹೋಗಿ ಬರಲು ನಿರ್ಧ­­ರಿಸಿದ. ದಾರಿಯಲ್ಲಿದ್ದ ಸ್ನೇಹಿತನ ಮನೆಗೆ ಹೋಗಿ, ‘ನಾನು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೇನೆ. ನಿನ್ನ ಮಗ ಧನದೇವ­ನನ್ನೂ ಕಳುಹಿಸಿಕೊಡು. ಅವನಿಗೂ ದೇವರ ದರ್ಶನವಾಗಲಿ. ಅವನೊಂದಿಗೆ ಪ್ರಸಾದದ ಲಾಡು­ಗಳನ್ನೂ ಕೊಟ್ಟು ಕಳು­ಹಿ­ಸುತ್ತೇನೆ’. ಸ್ನೇಹಿತ ಒಪ್ಪಿ ತನ್ನ ಹತ್ತು ವರ್ಷದ ಮಗ ಧನದೇವನನ್ನು ಕಳು­ಹಿ­ಸಿದ.

ದೇವಸ್ಥಾನದಿಂದ ಮರಳಿ ಬರುವಾಗ ಆ ಹುಡುಗನನ್ನು ಜೀರ್ಣಧನ ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಕ್ಕೆ ಹಾಕಿ, ಮಲಗಿಸಿ, ಬಾಗಿಲು ಹಾಕಿ­ಕೊಂಡು, ಪ್ರಸಾದ ತೆಗೆದುಕೊಂಡು ಸ್ನೇಹಿತನ ಮನೆಗೆ ಬಂದ. ಜೀರ್ಣಧನ ಒಬ್ಬನೇ ಬರುವುದನ್ನು ನೋಡಿ ಸ್ನೇಹಿತ ಕೇಳಿದ, ‘ನನ್ನ ಮಗ ಧನದೇವ ಎಲ್ಲಿ?’ ತಕ್ಷಣ ಜೀರ್ಣಧನ ಅಳತೊಡಗಿದ. ಬಿಕ್ಕಿ ಬಿಕ್ಕಿ ಅತ್ತು ಹೇಳಿದ, ‘ಆ ದುರಂತವನ್ನು ಹೇಗೆ ಹೇಳಲಿ ಗೆಳೆಯಾ? ದೇವಸ್ಥಾನದಿಂದ ಬರುವಾಗ ನದಿಯ ದಂಡೆಯಲ್ಲಿ ನಿಂತಿ­ದ್ದೆವು. ನಿನ್ನ ಮಗನ ಕೈಯಲ್ಲಿದ್ದ ಪ್ರಸಾದ­ವನ್ನು ತಿನ್ನಲು ಭರ್ರೆಂದು ಹಾರಿ ಬಂದ ಹದ್ದೊಂದು ಅವನನ್ನೇ ಎತ್ತಿ­ಕೊಂಡು ಹೋಗಿಬಿಟ್ಟಿತು’ ಹೀಗೆ  ಹೇಳಿ ಮತ್ತಷ್ಟು ಅತ್ತ. ಗೆಳೆಯ ಹೌಹಾರಿದ.

‘ನೀನೊಬ್ಬ ಮೋಸಗಾರ. ಹತ್ತು ವರ್ಷದ ಬಾಲ­ಕನನ್ನು ಹದ್ದು ಹೇಗೆ ಎತ್ತಿಕೊಂಡು ಹೋದೀತು? ನೀನು ನನ್ನ ಮಗನನ್ನು ತಕ್ಷಣ ಒಪ್ಪಿಸದಿದ್ದರೆ ನ್ಯಾಯಾಧೀಶರ ಮುಂದೆ ಕರೆದೊ­ಯ್ಯುತ್ತೇನೆ’ ಎಂದೆಲ್ಲ ಹಾರಾ­ಡಿದ. ಆಗ ಜೀರ್ಣಧನ, ‘ಅಲ್ಲಯ್ಯಾ, ಭಾರದ ಕಬ್ಬಿಣದ ತಕ್ಕಡಿ­ಯನ್ನು ಇಲಿಗ­ಳು ತಿನ್ನ­ಬಹು­ದಾದರೆ ಹದ್ದು ಹುಡುಗನನ್ನು ಎತ್ತಿಕೊಂಡು ಹೋಗ­ಲಾ­ರದೇ? ಎಂದು ಕೊಂಕಿನಿಂದ ಹೇಳಿದ. ಸ್ನೇಹಿತ ಮರು­ಮಾತಾಡದೇ ಮನೆಯೊಳಗೆ ಹೋಗಿ ತಕ್ಕಡಿಯನ್ನು ತಂದುಕೊಟ್ಟ. ನಂತರ ಅವನ ಮಗನೂ ಮನೆ ತಲುಪಿದ.

ಇದ­ರಿಂದ ನನಗೆ ದೊರೆತ ಪಾಠವೆಂದರೆ ಯಾವು­ದಾದರೂ ಆಘಾತಕರವಾದ ಸನ್ನಿ­ವೇಶ ಎದುರಾದರೆ ಅದನ್ನು ನಾವು ಅತ್ಯಂತ ಸಂಯಮದಿಂದ ಎದುರಿಸ­ಬೇಕು. ಸಮ­ತೋಲನ ಕಳೆದುಕೊಂಡು ಪ್ರತಿಕ್ರಿಯಿಸಿ­ದರೆ ಪ್ರತಿಫಲ ವಿಪರೀತ­ವಾಗು­ತ್ತದೆ. ಪ್ರತಿಕ್ರಿಯೆ ತಕ್ಷಣದ್ದು, ಉದ್ವೇಗದಿಂದ ಬಂದದ್ದು. ಅದರಲ್ಲಿ ವಿವೇಚನೆ ಇರು­ವುದಿಲ್ಲ. ಮುಂದೆ ಇರುವ ಆಯ್ಕೆಗಳನ್ನು ಪರಿಶೀಲಿಸುವ ವ್ಯವಧಾನವೂ ಇರು­ವುದಿಲ್ಲ. ಒಂದೆರಡು ಕ್ಷಣದ ಸಂಯಮ ಕಣ್ಣಮುಂದೆ ಅನೇಕ ಆಯಾ­ಮ­ಗಳನ್ನು ತೆರೆದಿಟ್ಟು ಸಮಸ್ಯೆಯನ್ನು ಬಗೆಹರಿ­ಸುತ್ತದೆ.

Thanks

http://www.prajavani.net/columns/ಒಂದು-ಕ್ಷಣದ-ಸಂಯಮ

Advertisements
This entry was posted in Inspiration stories. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s