ಪ್ರಿಯವಾದ ಮಾತು [ಬುದ್ಧಿ­ವಂತಿಕೆಯಿಂದ ಮಾತನಾ­ಡುವುದೆಂದರೆ ಮೋಸಮಾಡುವುದಲ್ಲ]

ನನ್ನ ಗೆಳೆಯರೊ­ಬ್ಬರಿದ್ದಾರೆ. ಅವರಿಗೆ ತಮ್ಮ ಸ್ವಭಾವದ ಬಗ್ಗೆ ಹೆಮ್ಮೆಗಿಂತ ಅಹಂಕಾರ.  ಅವರು ಯಾವಾಗಲೂ ಹೇಳುತ್ತಾರೆ, ‘ನೋಡಿ, ನನ್ನ ಮಾತೆಂದರೆ ಒಂದೇ ಹೊಡೆತ, ಎರಡು ತುಂಡು. ನನ್ನ ಮುಂದೆ ಯಾರಿದ್ದಾರೆ ಎಂಬುದು ಮುಖ್ಯ­ವಲ್ಲ. ಯಾರಿದ್ದರೂ ನಾನು ಹೇಳುವುದು ಒಂದೇ ರೀತಿ. ಮುಖದ ಮೇಲೆ ಹೊಡೆದಂತೆ ಹೇಳಿಬಿಡುತ್ತೇನೆ.  ಅವರು ಏನು ಅಂದುಕೊಳ್ಳುತ್ತಾರೋ ಎಂದು ಭಯಪಡುವುದಿಲ್ಲ’. ಈ ತರಹ ಮಾತನಾಡುವವರು ಸಾಕಷ್ಟು ಜನ ಇದ್ದಾರೆ. ಆದರೆ, ಅವರು ಜೀವನದಲ್ಲಿ ತುಂಬ ಕಷ್ಟಪಟ್ಟಿರುವುದೂ ಸತ್ಯ.  ನಾವು ಕಪಟ ಮಾಡಬೇಕಿಲ್ಲ. ಆದರೆ, ಯಾರ ಸ್ವಭಾವ ಹೇಗೆ ಎಂದು ತಿಳಿದು ಅವರಿಗೆ ಒಪ್ಪಿತವಾಗುವಂತೆ ಮಾತನಾಡುವುದು ವಿವೇಕ. ಒಂದು ಕಾಡಿನಲ್ಲಿ ಒಂದು ವಯಸ್ಸಾದ ನರಿ ನಡೆದು ಹೋಗುತ್ತಿ­ರುವಾಗ ಬದಿಯಲ್ಲಿ ಸತ್ತು ಬಿದ್ದ ಆನೆ­ಯೊಂದನ್ನು ಕಂಡಿತು.

ಅದರ ಬಾಯಿ­ಯಲ್ಲಿ ನೀರೂರಿತು. ಇನ್ನು ಒಂದು ವಾರ ಊಟದ ಚಿಂತೆಯಿಲ್ಲ ಎಂದು ಸಂತೋಷ­ಪಟ್ಟಿತು. ಹೋಗಿ ಆನೆಯ ಶರೀರವನ್ನು ಕಚ್ಚಿತು. ಮೊದಲೇ ಅದು ದಪ್ಪನಾದ ಚರ್ಮ, ಅದರೊಂದಿಗೆ ನರಿಯ ಹಲ್ಲು­ಗಳೂ ಅಲುಗಾಡುತ್ತವೆ. ಅದಕ್ಕೆ ಚರ್ಮ­ವನ್ನು ಕತ್ತರಿಸಲಾಗಲಿಲ್ಲ. ಯಾವು­ದಾ­ದರೂ ಬಲಶಾಲಿಯಾದ ಮೃಗವೊಂದು ಚರ್ಮವನ್ನು ಒಂದೆಡೆ ಕತ್ತರಿಸಿ­ಹೋದರೂ ಸಾಕು ತನಗೆ ಸಮಾರಾಧನೆ ಎಂದುಕೊಂಡು ಕಾಯತೊಡಗಿತು. ಆಗ ಅಲ್ಲಿಗೆ ಸಿಂಹವೊಂದು ಬಂದಿತು. ನರಿ ಅತ್ಯಂತ ವಿನಯದಿಂದ ಕೈಮುಗಿದು, ‘ಪ್ರಭೂ, ನಾನು ತಮಗೋಸ್ಕರವೇ ಈ ಆನೆಯ ಶರೀರವನ್ನು ಕಾಪಾಡಿಕೊಂಡು ನಿಂತಿದ್ದೇನೆ.  ತಾವು ದಯವಿಟ್ಟು ಇದನ್ನು ಸ್ವೀಕರಿಸಬೇಕು’ ಎಂದಿತು. ಇಡೀ ಆನೆ­ಯನ್ನು ಸಿಂಹ ತಿನ್ನಲಾರದು.  ಅದು ತಿಂದು ಬಿಟ್ಟಿದ್ದು ತನಗೆ ಎಷ್ಟೋ ದಿನ ಸಾಕಾದೀತು ಎಂಬುದು ನರಿಯ ಆಸೆ. ಆದರೆ ಸಿಂಹ ಗಾಂಭೀರ್ಯದಿಂದ, ‘ಧನ್ಯವಾದಗಳು. ನಿನಗೆ ಗೊತ್ತಿದೆ, ನಾನು ಎಂದೂ ಮತ್ತೊಬ್ಬರು ಕೊಂದ ಪ್ರಾಣಿ­ಯನ್ನು ತಿನ್ನುವುದಿಲ್ಲ.  ಆದ್ದರಿಂದ ಈ ಆನೆಯ ದೇಹ ನಿನಗೇ ಬಹುಮಾನ’ ಎಂದು ಹೇಳಿ ಹೊರಟು ಹೋಯಿತು.

ಅರ್ಧಗಂಟೆಯಲ್ಲಿ ಅಲ್ಲಿಗೊಂದು ಚಿರತೆ ಗುರುಗುಟ್ಟುತ್ತ ಬಂದಿತು. ಅದು ಮೊದಲೇ ಉಗ್ರಪ್ರಾಣಿ. ಅದಕ್ಕೀಗ ಹಸಿ­ವೆಯೂ ಆಗಿದೆ. ಇದನ್ನು ನಿಭಾ­ಯಿಸು­ವುದು ಹೇಗೆ ಎಂದು ಒಂದು  ಕ್ಷಣ ಚಿಂತಿ­ಸಿತು. ಮರುಕ್ಷಣವೇ ಗಟ್ಟಿಯಾದ ಧ್ವನಿಯಲ್ಲಿ ಧೈರ್ಯದಿಂದ ಹೇಳಿತು, ‘ಸ್ವಾಮೀ, ನೀವು ಬಲಶಾಲಿಗಳು ನಿಜ. ಆದರೆ, ಈಗ ನೀವು ತಪ್ಪು ಸ್ಥಳದಲ್ಲಿ ತಪ್ಪು ಸಮಯದಲ್ಲಿ ಬಂದಿದ್ದೀರಿ.  ಈ ಆನೆ­ಯನ್ನು ಈಗ ತಾನೇ ಸಿಂಹ ಬೇಟೆ­ಯಾಡಿದ್ದು ಸ್ನಾನ ಮಾಡಿಬರಲು ನದಿಗೆ ಹೋಗಿದೆ. ಅದು ಬರುವವರೆಗೆ ಯಾರೂ ಮುಟ್ಟದಂತೆ ಕಾಯಲು ನನಗೆ ಹೇಳಿ ಹೋಗಿದೆ. ಅದಲ್ಲದೇ, ಸೊಕ್ಕಿಗೆ  ಬಂದ ಚಿರತೆ ಏನಾದರೂ ಹತ್ತಿರ ಬಂದರೆ ಹೇಳು ಅದನ್ನು ಉದ್ದುದ್ದ ಸೀಳಿ ಬಿಡುತ್ತೇನೆಯೆಂದು  ವಿಶೇಷ ಸಂದೇಶ­ವನ್ನು ನೀಡಿದೆ’ ಎಂದಿತು.  ಮರುಕ್ಷಣ­ದಲ್ಲಿ ಚಿರತೆ ಮಾಯವಾಯಿತು.

ನಂತರ ಅಲ್ಲಿಗೆ ಒಂದು ಹುಲಿ ಬಂದಿತು. ಆಗ ನರಿ, ‘ಸ್ವಾಮೀ, ಇದು ಸಿಂಹದ ಬೇಟೆ.  ಆದರೆ, ಸಿಂಹ ಬರಲು ಬಹುಕಾಲ ಬೇಕು. ತಾವು ಆ ಬದಿಯ ಭಾಗವನ್ನು ಬಳಸಬಹುದು’ ಎಂದಿತು.  ಹುಲಿ ಹೆದರಿಕೆಯಿಂದ ಹಿಂದೆ ಮುಂದೆ ನೋಡಿದಾಗ, ‘ಚಿಂತೆ ಬೇಡ, ನಾನು ದೂರದಲ್ಲಿದ್ದು ಸಿಂಹ ಹತ್ತಿರ ಬಂದಾಗ ಕೂಗಿ ಎಚ್ಚರಿಸುತ್ತೇನೆ. ನಿಧಾನವಾಗಿ ಊಟಮಾಡಿ’ ಎಂದಿತು.  ಹುಲಿ ಆನೆಯ ಚರ್ಮವನ್ನು ಕತ್ತರಿಸಿ ತಿನ್ನತೊಡಗಿತು.  ಐದು ನಿಮಿಷದ ನಂತರ ನರಿ, ‘ಓಡಿ, ಓಡಿ, ಸಿಂಹ ಬಂದಿತು’ ಎಂದು ಕೂಗಿತು. ಹುಲಿ ನಾಪತ್ತೆ! ನರಿಗೆ ಒಂದು ವಾರ ಊಟದ ತೊಂದರೆಯಾಗಲಿಲ್ಲ.  ಬುದ್ಧಿ­ವಂತಿಕೆಯಿಂದ ಮಾತನಾ­ಡುವುದೆಂದರೆ ಮೋಸಮಾಡುವುದಲ್ಲ.  ಅದರಂತೆ ಎಲ್ಲರ ಜೊತೆಗೂ ಒಂದೇ ರೀತಿ ಮಾತ­ನಾ­ಡುವುದೂ ಅಲ್ಲ. ಎದುರಿಗಿರುವವರ ಮನಸ್ಸಿಗೆ ನೋವಾಗದಂತೆ ಸತ್ಯವನ್ನೇ ಹೇಳುವುದು ಒಂದು ಕಲೆ.  ಈ ಕಲೆ­ಯನ್ನು ಸಾಧಿಸಿರುವವರಿಗೆ ವೈರಿಗಳಿಲ್ಲ.

www.prajavani.net/columns/ಪ್ರಿಯವಾದ-ಮಾತು

Advertisements
Posted in Moral Stories | Leave a comment

ಸಮಸ್ಯೆಗಳ ಸವಾರಿ

ಗೋವಿಂದ ಅನಾಥ ತರುಣ. ದೇವಸ್ಥಾನದಲ್ಲಿ ಪೂಜೆ ಮಾಡುತ್ತ ತನ್ನ ಗುಡಿಸಲಿ­ನಲ್ಲಿ ಬದುಕುತ್ತಿದ್ದ. ಅವನನ್ನು ಊರ ಜನ ತುಂಬ ಮೆಚ್ಚುತ್ತಿದ್ದರು. ಇದು ಗೋವಿಂದನ ಇಬ್ಬರು ದೊಡ್ಡಪ್ಪಂದಿರಿಗೆ ಸಂಕಟ ಉಂಟು ಮಾಡುತ್ತಿತ್ತು. ಒಂದು ದಿನ ಗೋವಿಂದ ದೇವಸ್ಥಾನಕ್ಕೆ ಹೋದಾಗ ಅವನ ಗುಡಿಸಲಿಗೆ ಇವರು ಬೆಂಕಿ ಹಾಕಿದರು.

ಇವನು ಬರುವ ಹೊತ್ತಿಗೆ ಒಳಗಿನ ವಸ್ತುಗಳೊಂದಿಗೆ ಇಡೀ ಗುಡಿಸಲು ಭಸ್ಮವಾಗಿತ್ತು. ಗೋವಿಂದ ದುಃಖದಿಂದ ಒಂದು ಚೀಲದಲ್ಲಿ ಆ ಬೂದಿ­­ಯನ್ನು ತುಂಬಿಕೊಂಡು ಊರುಬಿಟ್ಟು ಮತ್ತೊಂದು ಹಳ್ಳಿಗೆ ನಡೆದ.  ಒಂದು ಮರದ ಕೆಳಗೆ ಕುಳಿತುಕೊಂಡ. ಊರ ಜನ ಇವನ ಅರ್ಚಕನ ವೇಷ, ಹಣೆಯ ಕುಂಕುಮ, ಚೀಲ­ದಲ್ಲಿದ್ದ ಬೂದಿಯನ್ನು ನೋಡಿ ಬಂದು ಕುತೂಹ­ಲದಿಂದ ಮಾತನಾಡಿಸಿದರು.

ಈತ ಒಂದು ಮಾತೂ ಆಡಲಿಲ್ಲ. ಅವರು ಬೂದಿಯ ಬಗ್ಗೆ ಕೇಳಿದಾಗ ಒಂದು ಚಿಟಿಕೆ ಬೂದಿ ತೆಗೆದುಕೊಟ್ಟ.  ಅದನ್ನು ತೆಗೆದುಕೊಂಡು ಹೋದವರು ಕಥೆಗಳನ್ನು ಕಟ್ಟಿದರು. ‘ಕೇದಾರನಾಥನಿಂದ ಮಹಾತ್ಮರು ಬಂದಿದ್ದಾರೆ, ಅವರು ಮಾತನಾಡು­ವುದಿಲ್ಲ, ಅತ್ಯಂತ ಪವಿತ್ರವಾದ ಭಸ್ಮ ತಂದಿದ್ದಾರೆ’ ಎಂದೆಲ್ಲ ಕಥೆಗಳು.

ಒಂದು ತಿಂಗಳಲ್ಲಿ ಗೋವಿಂದ ಮಹಾತ್ಮನೇ ಆದ. ಅವನ ಭಸ್ಮದಿಂದ ಪವಾಡ­ಗಳಾದ ಸುದ್ದಿ ಬಂದವು. ಗೋವಿಂದನ ಮುಂದೆ ಜನರ ಸಂದಣಿಯೇ ನೆರೆಯಿತು.  ಅವನ ಮುಂದೆ ಧನದ ರಾಶಿ. ಅಂದು ರಾತ್ರಿ ಎಲ್ಲ ಬೂದಿಯನ್ನು ಕೊಟ್ಟು ಹಣ­ವನ್ನು ಕಟ್ಟಿಕೊಂಡು ಗೋವಿಂದ ಊರಿಗೆ ಮರಳಿದ, ಅಲ್ಲಿ ಗಟ್ಟಿ ಮನೆ ಕಟ್ಟಿಸಿದ.

ದೊಡ್ಡಪ್ಪಂದಿರಿಗೆ ಮತ್ತೆ ಸಂಕಟವಾಯಿತು. ಅವನು ಹೇಗೆ ಹಣ ಗಳಿಸಿದ ಎಂದು ಕೇಳಿದಾಗ ಆತ ನಿಜವಾಗಿ ನಡೆದದ್ದನ್ನು ಹೇಳಿದ. ಗುಡಿಸಿಲಿನ ಬೂದಿಗೇ ಇಷ್ಟು ಬೆಲೆ ಇದ್ದರೆ ತಮ್ಮ ದೊಡ್ಡ ಮನೆಯ ಬೂದಿಗೆ ಮತ್ತಷ್ಟು ಹಣ ಸಿಕ್ಕೀತು ಎಂದು ತಮ್ಮ ಮನೆಗಳನ್ನು ಸುಟ್ಟು ಬೂದಿ ಕಟ್ಟಿಕೊಂಡು ಆ ಊರಿಗೆ ಹೋದರು.  ಒಬ್ಬ ಮಹಾತ್ಮ ಹೋಗಿ ಇಬ್ಬರು ಢೋಂಗಿ ಜನ ಬಂದಿದ್ದಾರೆಂದು ಜನ ಇವರನ್ನು ಹೊಡೆದು ಓಡಿಸಿದರು. ಇವರಿಗೆ ಬದುಕಿ ಬಂದದ್ದೇ ದೊಡ್ಡದಾಯಿತು.

ಊರಿಗೆ ಬಂದ ಮೇಲೆ ಇವರ ಕೋಪ ಇನ್ನೂ ಹೆಚ್ಚಾಯಿತು. ಒಂದು ದಿನ ಗೋವಿಂದನನ್ನು ಊರ ಹೊರವಲಯದಲ್ಲಿದ್ದ ನದಿಯ ಮೇಲಿದ್ದ ಸೇತುವೆಯ ಮೇಲೆ ಕರೆದುಕೊಂಡು ಹೋಗಿ, ‘ಅಲ್ಲಿ ನೋಡು. ಮತ್ಸ್ಯಕನ್ಯೆ ನಿನ್ನನ್ನು ಕರೆ­ಯುತ್ತಿದ್ದಾಳೆ’ ಎಂದು ಮೇಲಿನಿಂದ ತಳ್ಳಿ ಬಂದುಬಿಟ್ಟರು.  ಗೋವಿಂದನ ದೈವ ಚೆನ್ನಾಗಿತ್ತು. ನದಿ ದಂಡೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಹುಡುಗಿ ಇವನು ಬೀಳು­ವುದನ್ನು ನೋಡಿದಳು.

ಆಕೆ ಒಳ್ಳೆಯ ಈಜುಗಾರ್ತಿ. ನೀರಿಗೆ ಹಾರಿ ಅವನನ್ನು ಎಳೆದು ದಂಡೆಗೆ ತಂದು ಉಪಚರಿಸಿದಳು. ಎಂಟು ದಿನಗಳ ಮೇಲೆ ಗೋವಿಂದ ಒಂದು ಯೋಜನೆ ಮಾಡಿದ. ಆ ಹುಡುಗಿಗೆ ಸುಂದರವಾದ ಚಕಚಕನೇ ಹೊಳೆ­ಯುವ ಬಟ್ಟೆಗಳನ್ನು ತೊಡಿಸಿ, ಹೊಳೆಹೊಳೆಯುವ ನಕಲಿ ಆಭರಣ­ಗಳನ್ನು ಹಾಕಿಸಿ, ತಾನೂ ಅತ್ಯಂತ ಬೆಲೆಬಾಳುವ ಬಟ್ಟೆಗಳು, ಆಭರಣಗಳನ್ನು ಧರಿಸಿ ದೊಡ್ಡಪ್ಪಂದಿರ ಮನೆಗೆ ಹೋದ. ಇವನು ಬದುಕಿ ಬಂದದ್ದನ್ನು ಇಷ್ಟು ಐಶ್ವರ್ಯ­ವಂತನಾದದ್ದನ್ನು ಕಂಡು ಅವರು ಬೆರಗುಪಟ್ಟರು.

ಗೋವಿಂದ ಹೇಳಿದ, ‘ದೊಡ್ಡಪ್ಪ, ನೀವು ನನ್ನನ್ನು ನೀರಿಗೆ ತಳ್ಳಿ ತುಂಬ ಉಪಕಾರ ಮಾಡಿದಿರಿ. ನನಗೆ ಈ ಮತ್ಸ್ಯ ಕನ್ಯೆ ದೊರಕಿದಳು. ನದೀ ತಳದಲ್ಲಿ ಅವಳ ಸಾಮ್ರಾಜ್ಯವಿದೆ. ನಾವಿಬ್ಬರೂ ಮದುವೆಯಾಗಿದ್ದೇವೆ. ಈಗ ನಾನೇ ಚಕ್ರವರ್ತಿ. ಆದರೆ ನಾವಿಬ್ಬರೇ ಇದ್ದು ಬೇಜಾರಾಗಿದೆ. ನೀವೂ ದಯವಿಟ್ಟು ಅಲ್ಲಿಗೇ ಬಂದುಬಿಡಿ’. ಹೀಗೆ ಹೇಳಿ ಇಬ್ಬರೂ ನದಿಯ ಕಡೆಗೆ ನಡೆದರು. ದೊಡ್ಡಪ್ಪಂದಿರು ನದೀ ತಳದ ಸಾಮ್ರಾಜ್ಯಕ್ಕೆ ಹೋಗಿ ಅಲ್ಲಿಯೂ ಇವನ ಆಸ್ತಿ ಹೊಡೆಯುವ ಉದ್ದೇಶದಿಂದ ನದಿಗೆ ಹಾರಿದರು.

ಮತ್ಸ್ಯ ಕನ್ಯೆ ದೊರಕಲಿಲ್ಲ, ಆದರೆ ಮೀನುಗಳಿಗೆ ಆಹಾರವಾಗಿ ಮೇಲಕ್ಕೆ ಬರಲೇ ಇಲ್ಲ. ನಂತರ ಗೋವಿಂದ ಮರಳಿ ತನ್ನ ಊರಿಗೆ ಹುಡುಗಿಯೊಂದಿಗೆ ಬಂದು ಸುಖವಾಗಿದ್ದ. ಬುದ್ಧಿವಂತಿಕೆ ಇಲ್ಲದವರ ಮೇಲೆ ಸಮಸ್ಯೆಗಳು ಸವಾರಿ ಮಾಡುತ್ತವೆ. ಬುದ್ಧಿವಂತರು ಸಮಸ್ಯೆಗಳನ್ನೇ ಪರಿಹಾರಗಳನ್ನಾಗಿ ಮಾಡಿಕೊಂಡು ಅವುಗಳ ಮೇಲೆ ಸವಾರಿ ಮಾಡುತ್ತಾರೆ, ನಿರಾಳವಾಗಿ ಬದುಕುತ್ತಾರೆ.

http://www.prajavani.net/columns/ಸಮಸ್ಯೆಗಳ-ಸವಾರಿ

Posted in Inspiration stories | Leave a comment

ತಿರಸ್ಕಾರ ಮೆಟ್ಟಿ ನಿಂತ ಡೇವಿಡ್

ತಿರಸ್ಕಾರ ಮನಸ್ಸನ್ನು ಕುಗ್ಗಿಸುತ್ತದೆ, ಆತ್ಮವಿಶ್ವಾಸ ಕಡಿಮೆ ಮಾಡುತ್ತದೆ. ತಿರಸ್ಕಾರವನ್ನು ಎದುರಿಸಿದ ಮನುಷ್ಯ ಮಾಡುವ ಒಳ್ಳೆಯ ಕಾರ್ಯವನ್ನು ತೊರೆದು ನಿಷ್ಕ್ರಿಯನಾಗುವ ಸಂದರ್ಭ­ಗಳೂ ಅನೇಕ. ಬದುಕಿನಲ್ಲಿ ಈ ತಿರಸ್ಕಾರ ಎದುರಿಸಿ ಪುಟದೆದ್ದು ನಿಲ್ಲದವನು ಯಾವನೂ ನಾಯಕನಾಗಲಾರ. ನಾಯಕ­ರಾದ­ವರು ಈ ತಿರಸ್ಕಾರವನ್ನೇ ಮೆಟ್ಟಲಾಗಿ ಮಾಡಿಕೊಂಡು ಮೇಲೆದ್ದು ಸಾಧಕ­ರಾಗುತ್ತಾರೆ.

ಬೈಬಲ್ಲಿನ ಕಥೆ­ಗಳಲ್ಲಿ ಡೇವಿಡ್‌ನ ಕಥೆ ಬಹಳ ಮಾರ್ಮಿಕ­ವಾ­ದದ್ದು. ಡೇವಿಡ್ ತನ್ನ ಜೀವನದಲ್ಲಿ ಅನುಭವಿಸಿದಷ್ಟು ತಿರಸ್ಕಾರ­ವನ್ನು ಯಾರೂ ಅನು­ಭವಿ­ಸಿ­ರಲಿಕ್ಕಿಲ್ಲ. ಇಸ್ರೇಲಿನ ರಾಜನಾಗಿದ್ದ ಸೌಲನ ಆಡಳಿತವನ್ನು ದೇವರು ಮೆಚ್ಚ­ಲಿಲ್ಲ. ನಿನ್ನ ಬದಲಾಗಿ ನಾನು ಒಪ್ಪುವ ಒಬ್ಬನನ್ನು ರಾಜನನ್ನಾಗಿ ಮಾಡು­ತ್ತೇನೆ ಎಂದು ತಿಳಿಸಿ ಈ ಕಾರ್ಯಕ್ಕೆ ಪ್ರವಾದಿ ಸಾಮ್ಯುವೆಲ್‌­ನನ್ನು ನಿಯಮಿಸಿದ. ಅವನಿ­ಗಿದ್ದ ಕರ್ತವ್ಯವೆಂದರೆ ಬೆತ್ಲೆಹೆಮ್‌ನಲ್ಲಿದ್ದ ಜೆಸ್ಸಿಯ ಮನೆಗೆ ಹೋಗಿ ಅವನ ಒಬ್ಬ ಮಗನನ್ನು ರಾಜನನ್ನಾಗಿ ಮಾಡುವುದು. ಜೆಸ್ಸಿಗೆ ಏಳು ಜನ ಗಂಡುಮಕ್ಕಳು. ಅದ­ರಲ್ಲಿ ಕಡೆಯವನು ಡೇವಿಡ್. ಅವನ ತಂದೆಯೇ ಅವನನ್ನು ತಿರಸ್ಕರಿಸಿ ಬಿಟ್ಟಿದ್ದ.

ಆ ಹುಡುಗ ಕುರಿಕಾಯುವುದನ್ನು ಬಿಟ್ಟರೆ ಯಾವುದಕ್ಕೂ ಪ್ರಯೋಜನ­ವಿಲ್ಲ­­ವೆಂಬುದು ಅವನ ಮತ. ದಯವಿಟ್ಟು ಒಂದು ಕ್ಷಣ ಡೇವಿಡ್‌ನ ಸ್ಥಾನದಲ್ಲಿ ನಿಂತು ಯೋಚಿಸಿ, ಅದೆಂಥ ಹೀನ ಪರಿಸ್ಥಿತಿ. ತಂದೆ ತನ್ನ ಏಳೂ ಮಕ್ಕಳನ್ನು ಕರೆದು ಅದ್ಭುತ­ವಾದ ವಿಷಯ ತಿಳಿಸುತ್ತಾನೆ. ‘ಇಂದು ನಮ್ಮ ಮನೆಗೆ ಪ್ರವಾದಿ ಸಾಮ್ಯು­ವೆಲ್ ಬರಲಿದ್ದಾರೆ. ನನ್ನ ಮಕ್ಕಳಲ್ಲಿ ಒಬ್ಬನನ್ನು ಇಸ್ರೇಲಿನ ರಾಜನನ್ನಾಗಿ ಮಾಡು­ತ್ತಾರೆ. ಆದ್ದರಿಂದ ನೀವೆಲ್ಲ ಚೆನ್ನಾಗಿ ಅಲಂಕಾರ ಮಾಡಿ­ಕೊಂಡು ಸಿದ್ಧರಾಗಿರಿ. ಯಾರಿಗೆ ದೈವ ಒಲಿಯುತ್ತದೆಯೋ ಹೇಳುವುದೆಂತು? ಆದರೆ ಡೇವಿಡ್, ನೀನು ಇಲ್ಲಿ ಇರಬೇಕಿಲ್ಲ, ನಿಷ್ಪ್ರಯೋಜಕ ನೀನು.

ಹೊರಡು ನೀನು ಕಾಡಿಗೆ ಕುರಿ­ಗಳೊಂ­ದಿಗೆ. ನಿನ್ನ ಅಣ್ಣಂದಿರು ಆರು ಜನ ಇಲ್ಲಿದ್ದರೆ ಸಾಕು’. ಆ ಹುಡುಗ ತಲೆ ತಗ್ಗಿಸಿ ಕಾಡಿಗೆ ನಡೆದ. ಡೇವಿಡ್‌ನ ಅಣ್ಣಂದಿರೆಲ್ಲರೂ ಅವನನ್ನು ತಿರಸ್ಕರಿ­ಸಿದರು. ಈತ ಬೆಳೆ ಬೆಳೆಸಿ ಕಾಳುಗಳನ್ನು ತೆಗೆದುಕೊಂಡು ಅಣ್ಣಂದಿರ ಮನೆಗೆ ಹೋದರೆ, ಕಾಳು­ಗಳನ್ನು ತೆಗೆದು­ಕೊಂಡು ಇವನನ್ನು ಹೊರಗೆ ತಳ್ಳಿಬಿಡು­ವರು, ನೀನೇಕೆ ಇಲ್ಲಿಗೆ ಬಂದೆ? ಕುರಿ ತೆಗೆದುಕೊಂಡು ಕಾಡಿಗೆ ಹೋಗು ಎಂದು ಅಪಮಾನಿಸುವರು. ರಾಜ­ನಾ­ಗಿದ್ದ ಸೌಲ ಕೂಡ ತುಂಬ ಅಪಮಾನ ಮಾಡಿದ. ತನಗೆ ಬೇಕಾದಾಗ ಇವ­ನ­ನ್ನು ಕರೆಸಿ­ಕೊಂಡು ಇವನು ನುಡಿಸುವ ವಾದ್ಯವನ್ನು ಕೇಳಿ ಸಂತೋಷ­ಪಡುವ ಮತ್ತು ಮರುಕ್ಷಣವೇ ಭರ್ಜಿಯಿಂದ ಚುಚ್ಚಿ ಓಡಿಸಿ ಬಿಡುವ.

ಆದರೆ, ಪ್ರವಾದಿ ಸಾಮ್ಯುವೆಲ್ ಬಂದು ಜೆಸ್ಸಿಯ ಎಲ್ಲ ಮಕ್ಕಳನ್ನು ಒಬ್ಬೊಬ್ಬ­ರ­ನ್ನಾಗಿ ಕರೆದ. ಅವನ ಮನಸ್ಸಿನಲ್ಲಿ ಭಗವಂತ ಕುಳಿತು, ಇವನಲ್ಲ, ಇವನಲ್ಲ ಎಂದು ಹೇಳುತ್ತಲೇ ಬಂದ. ಆಗ ಒಬ್ಬ ಮಗ ಎಲಿಯಾಬ್ ಎದುರು ಬಂದ. ಅವನ ಭವ್ಯ ಆಕೃತಿಯನ್ನು ನೋಡಿ ಒಂದು ಕ್ಷಣ ಸಾಮ್ಯುವೆಲ್ ಕೂಡ ಇವನೇ ರಾಜ­ನಾಗುವವನು ಎನ್ನಿಸಿತು. ತಕ್ಷಣ ಅವನ ಮನಸ್ಸಿನಲ್ಲಿ ಭಗವಂತ ಹೇಳಿದ, ಬಾಹ್ಯ ಆಕಾರವನ್ನು ನೋಡಿ ತೀರ್ಮಾನಿ­ಸಬೇಡ, ಹೃದಯದ ನಿಷ್ಕಲ್ಮತೆಯನ್ನು ನೋಡು. ಆರು ಮಕ್ಕಳನ್ನು ನೋಡಿದ ಮೇಲೆ ಸಾಮ್ಯುವೆಲ್ ಕೇಳಿದ, ‘ಜೆಸ್ಸಿ, ನಿನ್ನ ಎಲ್ಲ ಮಕ್ಕಳೂ ಬಂದರೇ?’ ಜೆಸ್ಸಿ ಹೇಳುತ್ತಾನೆ, ‘ರಾಜನಾಗಬಹುದಾಗಿದ್ದ ಆರು ಜನ­ರನ್ನು ನೀವು ಕಂಡಿದ್ದೀರಿ.

ಇನ್ನೊಬ್ಬ ನಿರುಪಯೋಗಿ ಮಗ ಕಾಡಿ­ನಲ್ಲಿ ಕುರಿ ಮೇಯಿ­ಸಲು ಹೋಗಿದ್ದಾನೆ’. ‘ಅವನನ್ನೂ ಕರೆ’ ಎನ್ನುತ್ತಾನೆ ಸಾಮ್ಯುವೆಲ್. ಡೇವಿಡ್ ಬಂದು ಮುಂದೆ ನಿಂತ ತಕ್ಷಣ ಈತನೇ ಭಗವಂತ ನಿಯಮಿಸಿದ ಚಕ್ರ­ವರ್ತಿ ಎಂದು ಖಾತ್ರಿಯಾಗಿ ಅವನನ್ನೇ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸುತ್ತಾನೆ.  ಜನರು ನಮ್ಮನ್ನು ಅಳೆಯುವ ರೀತಿ, ಭಗವಂತ ನಮ್ಮನ್ನು ನೋಡುವ ರೀತಿ ಸಂಪೂರ್ಣ ಬೇರೆಯಾದದ್ದು. ಎಲ್ಲರೂ ನಮ್ಮನ್ನು ನಮ್ಮ ಹಣದಿಂದ, ಅಧಿಕಾರ­ದಿಂದ, ಜನಪ್ರಿಯತೆಯಿಂದ ಅಳೆದರೆ ಭಗವಂತ ನಮ್ಮನ್ನು ನಮ್ಮ ಹೃದಯದ ಶುದ್ಧತೆ­­ಯಿಂದ ಅಳೆಯುತ್ತಾನೆ.

ಉಳಿದ ವಿಷಯ­ಗಳು ಕೆಲಕಾಲ ಯಶಸ್ಸನ್ನು ನೀಡಿ­ದಂತೆ ಕಂಡರೂ ಕೊನೆಗೆ ಭಗವಂತನ ಆಯ್ಕೆಯೇ ನಿಲ್ಲುವುದು. ಆದ್ದರಿಂದ ಬದುಕಿ­ನಲ್ಲಿ ಜನ ತೋರುವ ತಿರಸ್ಕಾರ ಅಥವಾ ತೋರಿಕೆಯ ಆದರಕ್ಕೆ ಮನ ಸೋಲುವ ಬದಲು ಹೃದಯವನ್ನು ಆದಷ್ಟು ಶುದ್ಧವಾಗಿಟ್ಟುಕೊಳ್ಳುವು­ದರೆಡೆಗೆ ಮನ ನೀಡುವುದು ಕ್ಷೇಮ.

http://www.prajavani.net/columns/ತಿರಸ್ಕಾರ-ಮೆಟ್ಟಿ-ನಿಂತ-ಡೇವಿಡ್

Posted in Inspiration stories | Leave a comment

Bus and lightening… Beautiful

A bus full of passengers was traveling while suddenly the weather changed and there was a huge downpour and lightening all around. They could see that the lightening would appear to come towards the bus and then go elsewhere. After 2 or 3 instances, the driver stopped the bus about fifty feet away from a tree and said “We have somebody in the bus whose death is a certainty today. Because of that person everybody else will also get killed.I want each person to go one-by-one and touch the tree trunk and come back. Whom so ever death is certain will get caught up by the lightening and will die.But everybody else will be saved”.

They had to force the 1st person to go and touch the tree and come back. He reluctantly got down from the bus and went and touched the tree. His heart leaped with joy when nothing happened and he was still alive. This continued for rest of the passengers who were all relieved when they touched the tree and nothing happened.

When the last passengers turn came, everybody looked at him with accusing eyes. This passenger was also very afraid and reluctant. Everybody forced him to get down and go and touch the tree. With a fear of death, the last passenger walked to the tree and touched it. There was a huge sound of thunder and the lightening came down and hit the bus – yes the lightening hit the bus, and killed each and every passenger inside the bus. It was because of the presence of this last passenger that earlier, the entire bus was safe and the lightening could not strike the bus. Sometimes we try to take credit for our achievements, but this could also be because of a person right next to us.

Look around you – Probably GOD is there around you, in the form of Parents, spouse children, siblings, friends, etc, who are saving you from bad things to happen to you.

Think About it..

Posted in Spiritual Guide - ReBirth to Human. | 1 Comment

Whats in mind !!!

“If you understand something in only one way, then you don’t really
understand it at all. The secret of what anything means to us depends on
how we’ve connected it to all other things we know. Well-connected
representations let you turn ideas around in your mind, to envision things
from many perspectives until you find one that works for you. And that’s
what we mean by thinking!”
-Marvin Minsky

Posted in Inspiration stories | Leave a comment

Be humble, love and respect those around

John worked at a meat distribution factory. One day, when he finished with his work schedule, he went into the meat cold room (Freezer) to inspect something but in a moment of bad luck, the door closed and he was locked inside with no help in sight. Although he screamed and knocked with all his might, his cries went unheard as no one could hear him. Most of the workers had already gone and outside the cold room (freezer), it’s impossible to hear what was going on inside. Five hours later, whilst John was on the verge of death, the security guard of the factory eventually opened the door and saved him. John then asked the security guard what he came to do there as it wasn’t part of his work routine. His replies: “I’ve been working in this factory for 35 years. Hundreds of workers come in and out every day but you’re one of the few who greets me in the morning and says goodbye to me every night when leaving after working hours. Many treat me as if I am invisible. So today like every other day, you greeted me in your simple manner “Hello” at the entrance when resuming for work, But curiously after working hours today, I observed I’ve not heard your “Good bye see you tomorrow”. Hence I decided to check around the factory. I look forward to your greetings every day because to you, I am someone. By not hearing your farewell, I knew something had happened. Then I Sought and found you!

Moral Lesson: Be humble, love and respect those around you because life is too short. Try to have an impact on people in ways we can’t even imagine especially the people that cross our path daily. Stay blessed

Posted in Moral Stories | Leave a comment

ತಾಳ್ಮೆ ಯಾರಿಗೆ?

ಅಜ್ಜಿ ಶಾಪಿಂಗ್ ಮಾಲ್‌ಗೆ ಬಂದಿ­ದ್ದರು. ಏನೇನೋ ಕೊಂಡುಕೊಳ್ಳ­ಬೇಕೆಂದು ಬಂದಿದ್ದಾರೆ. ಆದರೆ, ಯಾವುದೂ ಸರಿಯಾಗಿ ನೆನಪಾಗುತ್ತಿಲ್ಲ. ಹಾಳಾದ್ದು ವಯಸ್ಸೇ ಹೀಗೆ, ಯಾವುದೂ ನೆನಪಿರೋದಿಲ್ಲ. ಅತ್ಯಂತ ನೆನಪಿನಿಂದ ಬರೆದಿಟ್ಟಿದ್ದ ಪಟ್ಟಿಯನ್ನು ಕೂಡ ಮನೆಯಲ್ಲೇ ಬಿಟ್ಟು ಬಂದಿದ್ದಾರೆ. ಆಯ್ತು, ಎಲ್ಲ ಕೌಂಟರ್‌ಗಳನ್ನು ನೋಡುತ್ತ ಹೋದರಾಯಿತು. ತನಗೆ ಬೇಕಾದ ವಸ್ತು ಕಣ್ಣಿಗೆ ಕಂಡರೆ ತೆಗೆದು­ಕೊಂಡ­ರಾಯಿತು ಎಂದು ಅಜ್ಜಿ ನಿಧಾನವಾಗಿ ನಡೆದರು.

ಮುಂದೆ ಚಾಕಲೇಟ್‌ಗಳ ಕೌಂಟರ್ ಬಂದಿತು. ಅದರ ಮುಂದೆ ನಿಂತಾಗ ತನ್ನ ಹಿಂದೆಯೇ ಯಾರೋ ಭಯಂಕರವಾಗಿ ಚೀರಿದಂತಾಯಿತು. ಅಜ್ಜಿಯ ಎದೆ ಝಲ್ಲೆಂದಿತು. ತಿರುಗಿ ನೋಡಿದರೆ ಒಬ್ಬ ಎಂಟು ವರ್ಷದ ಹುಡುಗ ಕುರ್ಚಿಯ ಮೇಲಿಂದ ಉರುಳಿ ಬಿದ್ದು ಕೂಗು­ತ್ತಿದ್ದಾನೆ. ಆಗ ಒಬ್ಬ ಹಿರಿಯ ಓಡಿಬಂದ, ಬಹುಶಃ ಆತ ಹುಡುಗನ ಅಜ್ಜ ಇರಬೇಕು. ಬಂದವನೇ ಹುಡುಗನನ್ನು ಎತ್ತಿದ. ‘ಗುಂಡಣ್ಣ ಕೋಪ ಬೇಡಪ್ಪ. ಮುಗೀತು, ಹತ್ತು ನಿಮಿಷದಲ್ಲಿ ಅಂಗಡಿಯಿಂದ ಹೊರಗೆ ಹೋಗಿ ಬಿಡೋಣ’ ಎಂದ. ಮಗುವನ್ನು ಕರೆದು­ಕೊಂಡು ಹೊರಟ.

ಮುಂದಿನ ತರಕಾರಿ ವಿಭಾಗದಲ್ಲಿ ಅದೇ ಹಣೆಬರಹ. ಆ ಹುಡುಗ ಅಸಾಧ್ಯ ಉಪದ್ಯಾಪಿ. ಒಂದು ಕ್ಷಣ ನಿಂತಲ್ಲಿ ನಿಲ್ಲಲಾರ. ಕೈಗೆ ಸಿಕ್ಕಿದ್ದನ್ನು ಎಳೆಯುತ್ತಾನೆ, ಸಾಮಾನುಗಳನ್ನು ಬೀಳಿಸು­ತ್ತಾನೆ. ನೋಡುತ್ತಿದ್ದಂತೆ, ಹುಡುಗ ದೊಡ್ಡ ತರಕಾರಿಯ ಬುಟ್ಟಿ  ಎಳೆದು ಬೀಳಿಸಿದ. ತರಕಾರಿ ಎಲ್ಲೆಡೆ ಚೆಲ್ಲಾಡಿತು. ಮತ್ತೆ ಅಜ್ಜ ಓಡಿ ಬಂದ. ಸುತ್ತಮುತ್ತಲಿನವರ ಇರಿಯುವ ನೋಟವನ್ನು ತಾಳಿಕೊಳ್ಳುತ್ತ ಹೇಳಿದ, ‘ಬೇಡಪ್ಪ, ಬೇಜಾರು ಬೇಡ ಗುಂಡಣ್ಣ. ತಾಳಿಕೋ, ಇನ್ನರ್ಧ ಗಂಟೆ. ಖರೀದಿ ಎಲ್ಲ ಮುಗಿಯಿತು’. ಮತ್ತೆ ಹುಡುಗನ ತಲೆಯ ಮೇಲೆ ಕೈಯಾಡಿಸಿ, ಕೈಹಿಡಿದು ಕರೆದುಕೊಂಡು ಹೊರಟ. ಅಜ್ಜಿಗೆ ಈ ಅಜ್ಜನ ತಾಳ್ಮೆಯ ಬಗ್ಗೆ ಆಶ್ಚರ್ಯ­ವಾಯಿತು.

ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅಜ್ಜ ಮತ್ತೇನನ್ನೋ ಕೊಳ್ಳಲು ಹೋದಾಗ, ಈ ಹುಡುಗ ಓಡಿ ಹೋಗಿ ಯಾವುದೋ ವಸ್ತುವನ್ನು ಎಳೆಯಲು ಹೋದ. ಮೊದಲೇ ನುಣುಪಾದ ನೆಲ, ಅದರ ಮೇಲೆ ಒಂದಿಷ್ಟು ನೀರು ಬಿದ್ದಿತ್ತೋ ಏನೋ, ಸುಂಯ್ ಎಂದು ಜಾರಿ ಬಿದ್ದ. ಪೆಟ್ಟು ಎಷ್ಟಾಯಿತೋ ತಿಳಿಯದು. ಆದರೆ ಆತ ಹೋ ಎಂದು ಅರಚಿದ್ದು ಮಾತ್ರ ಇಡೀ ಅಂಗಡಿಗೆ ಕೇಳಿಸಿತು. ಅವನ ಕೂಗನ್ನು ಕೇಳಿ ಸುತ್ತಮುತ್ತಲಿದ್ದ ಗಿರಾಕಿಗಳು ಓಡಿ ಬಂದು ಅವನ ಸುತ್ತ ನಿಂತರು.

ಈ ಪ್ರಚಂಡ ಮತ್ತೆ ಅರಚಿದ, ಮತ್ತಷ್ಟು ಭಯಂಕರವಾಗಿ ಅರಚಿದ. ಅವನ ಕೂಗಾಟ ಹಾರಾಟಕ್ಕೆ ಬೇರೆ ಮಕ್ಕಳು ಗಾಬರಿಯಾಗಿ ಅಳತೊಡಗಿ­ದವು. ಮತ್ತೆ ಅಜ್ಜ ಓಡಿ ಬಂದ. ಮೊಮ್ಮಗನನ್ನು ಎಬ್ಬಿಸಿ ನಿಲ್ಲಿಸಿದ. ಅವನ ಬಾಯಿಯ ಮೇಲೆ ತನ್ನ ಕೈಯನ್ನಿಟ್ಟು ಕೂಗಾಟವನ್ನು ಕಡಿಮೆಮಾಡಲು ಪ್ರಯತ್ನಿಸಿದ.

ಹುಡುಗ ಅಜ್ಜನ ಕೈ ಕಿತ್ತಿ ಹಾಕಿ ಮತ್ತೆ ಇನ್ನ್ನೂ ಭಯಂಕರವಾಗಿ ಕೂಗಿದ. ಅಜ್ಜನ ಮುಖ ಕೆಂಪಾಯಿತು. ಮತ್ತೆ ಸಮಧಾನದಿಂದ ಹೇಳಿದ, ‘ಬೇಡಪ್ಪ ಗುಂಡಣ್ಣ, ಬೇಜಾರುಬೇಡ, ಕೋಪಮಾಡಿಕೊಳ್ಳಬೇಡ. ಆಯ್ತು, ಇನ್ನು ಮನೆಗೆ ಹೊರಟೇ ಬಿಡೋಣ ಬಾ’ ಎಂದು ಅವನನ್ನು ಕರೆದುಕೊಂಡು ಹೊರಗೆ ನಡೆದ.

ಇದೆಲ್ಲವನ್ನೂ ನೋಡಿದ ಅಜ್ಜಿಗೆ, ಅಜ್ಜನ ಬಗ್ಗೆ ಬಹಳ ಅಭಿಮಾನ ಉಂಟಾ­ಯಿತು. ಆಕೆ ಆತನ ಬಳಿ ಹೋಗಿ ಹೇಳಿದಳು, ‘ನನಗೆ ನಿಮ್ಮ ತಾಳ್ಮೆ ಅದ್ಭುತ ಎನ್ನಿಸುತ್ತದೆ. ಇಂಥ ಕೋಲಾಹಲಪ್ರಿಯ­ನಾದ ಹುಡುಗನನ್ನು ಸಮಾಧಾನದಿಂದ ಸಂಭಾಳಿಸುತ್ತೀರಲ್ಲ. ನಿಮ್ಮ ಹುಡುಗ ಗುಂಡಣ್ಣ ಎಂಥ ಅನಾಹುತ ಮಾಡಿ­ದರೂ ಅವನಿಗೆ ಸಾಂತ್ವನ ಹೇಳುತ್ತೀರಲ್ಲ, ನಿಮಗೆ ಇದು ಹೇಗೆ ಸಾಧ್ಯವಾಯಿತು?’. ಅಜ್ಜನ ಮುಖದಲ್ಲಿ ಗಲಿಬಿಲಿ ಕಂಡಿತು. ಆತ ಏನು ಹೇಳಲೂ ತೋಚದೆ ತೊದಲಿದ. ತೊದಲುತ್ತಲೇ ಹೇಳಿದ, ‘ಅಮ್ಮ, ಆ ಹುಡುಗನ ಹೆಸರು ಪುಟ್ಟಣ್ಣ. ನನ್ನ ಹೆಸರು ಗುಂಡಣ್ಣ.

ನಾನು ಅಷ್ಟು ಹೊತ್ತು ಸಮಾಧಾನ ಮಾಡಿಕೊಳ್ಳು­ತ್ತಿದ್ದದ್ದೂ ನನ್ನನ್ನು, ಅವನನ್ನಲ್ಲ’. ಯಾವುದನ್ನೂ ಗುಣಪಡಿಸುವುದು ಸಾಧ್ಯವಿಲ್ಲವೋ ಅದನ್ನು ತಡೆದು­ಕೊಳ್ಳದೇ ಬೇರೆ ದಾರಿಯಿಲ್ಲ. ಹೀಗೆ ತಡೆದುಕೊಳ್ಳುವಾಗ ನಮಗೆ ಹೆಚ್ಚಿನ ತಾಳ್ಮೆಯ ಅಗತ್ಯವಿದೆ. ಮತ್ತೊಬ್ಬರಿಗೆ ಸಮಾಧಾನ ಹೇಳುವುದಕ್ಕಿಂತ ನಮ್ಮ ಮನಸ್ಸಿಗೆ ಸಮಾಧಾನ ತಂದುಕೊಳ್ಳುವು­ದರಲ್ಲಿಯೇ ಸಾರ್ಥಕ್ಯವಿದೆ.

http://www.prajavani.net/columns/ತಾಳ್ಮೆ-ಯಾರಿಗೆ

Posted in Inspiration stories | Leave a comment

Story of Baby Mosquito

SIMPLE AND MEANINGFUL… :! (Story of Baby Mosquito )
Baby Mosquito went to his mum and said, “Mum, give me permission to Fly, I think I’m grown
up now” his Mum said, “wait for your Dad  in the Evening”

when his Dad came, the baby mosquito asked for Permission to fly and His dad said,  “Ok my son, But take great Care,,!”

After an hour, baby Mosquito came back and Dad Asked, “my son, How was your flight?”

Baby Mosquito said, “It was awesome, I perfected my flight so well that, people started Clapping at Me..!”

His dad said, “OHHH my son, those are Not claps, they were Weapons against you my son….
Thanks goodness you are alive!”

MORAL LESSON: As we go out for daily mission, most people forget that we are under God’s protection. Pray always and you will overcome temptations.

NOTE: With God, NO weapon formed against us, shall prosper.

Posted in Spiritual Guide - ReBirth to Human. | Leave a comment

ಸಂತೋಷ ಜೀವನದ ಸೂತ್ರ

ಉತ್ಸಾಹಿ ಜನರನ್ನು ಕಂಡರೆ ಎಲ್ಲರಿಗೂ ತುಂಬ ಖುಷಿಯಾಗು­ತ್ತದೆ. ಒಮ್ಮೆ ಅಮೆರಿಕದ ಮಿಷಿಗನ್ ಪ್ರಾಂತ್ಯಕ್ಕೆ ಹೋದಾಗ ಕಂಡ ಸಂಗತಿ ಮನ ಸೆರೆಹಿಡಿಯಿತು.

ಒಬ್ಬ ಸ್ನೇಹಿತರು ನನ್ನನ್ನು ಬಂದು ಸುಧಾರಣೆಯ ಶಾಲೆಗೆ ಕರೆದೊಯ್ದರು. ಈ ಶಾಲೆಗಳು ಮೂಲಭೂತವಾಗಿ ದಾರಿತಪ್ಪಿದ ಮಕ್ಕಳನ್ನು ಸರಿಪಡಿಸಲು ಇರುವ ವ್ಯವಸ್ಥೆ.  ಅಲ್ಲಿಗೆ ಬರುವವರೆಲ್ಲ ಸಾಮಾನ್ಯವಾಗಿ ಶಿಕ್ಷೆ ಹೊಂದಿ, ಮನೆ ತೊರೆದು ಸಮಾಜದಲ್ಲಿ ಕೆಟ್ಟ ಹೆಸರನ್ನೇ ಪಡೆದವರು. ಅವರನ್ನು ದಾರಿಗೆ ತರುವುದು ಸುಲಭದ ವಿಷಯವಲ್ಲ.  ಆದರೆ, ನಾನು ನೋಡಿದ ಫ್ಲಾಯ್ಡ್ ಸ್ಟಾರ್ ಶಾಲೆ ವಿಶಿಷ್ಟವಾಗಿತ್ತು. ಅಲ್ಲಿಯ ಮಕ್ಕಳು ತುಂಬ ಕಳೆಕಳೆಯಾಗಿ­ರುವುದಲ್ಲದೆ ಶಿಸ್ತಿನಿಂದಿದ್ದರು. ಈ ಶಾಲೆಗಳನ್ನು ಪ್ರಾರಂಭಿಸಿದವರು

. ಫ್ಲಾಯ್ಡ್ ಸ್ಟಾರ್.  ಆತ ನಾಲ್ಕು ವರ್ಷದವನಿದ್ದಾಗ ಅವನ ಮನೆಗೆ ಬಂದ ಹಿರಿಯರೊಬ್ಬರು ತಾವು ಐವತ್ತು ಅನಾಥ ಮತ್ತು ದಾರಿತಪ್ಪಿದ ಮಕ್ಕಳನ್ನು ಸಾಕುತ್ತಿರುವುದಾಗಿ ಹೇಳಿದರಂತೆ.  ಅಂದೇ ಈ ಹುಡುಗ ತಾಯಿಗೆ  ಹೇಳಿದನಂತೆ, ‘ನಾನೂ ದೊಡ್ಡವನಾದ ಮೇಲೆ ಐವತ್ತು ಮಕ್ಕಳಿಗೆ ಆಶ್ರಯ ಕೊಡುತ್ತೇನೆ’.  ತನ್ನ ಶಿಕ್ಷಣ ಮುಗಿದ ಮೇಲೆ ತಾನು ತೀರ್ಮಾನ ಮಾಡಿದಂತೆ ಈ ಸುಧಾರಣಾ ಶಾಲೆಯನ್ನು ತೆರೆದ.  ಆತ ಅಲ್ಲಿಗೆ ಬಂದ ವಿದ್ಯಾರ್ಥಿಗಳನ್ನು ಹೇಗೆ ಸುಧಾರಿಸಿದರು ಎಂಬುದಕ್ಕೆ ಒಂದು ಉದಾಹರಣೆ ಇದು.

ಒಂದು ಬಾರಿ ಒಬ್ಬ ತರುಣನನ್ನು ಪೊಲೀಸರು ಈ ಶಾಲೆಗೆ ತಂದು ಬಿಟ್ಟರು. ಯಾರನ್ನು ಸುಧಾರಿಸಿದರೂ ಈತನನ್ನು ಸರಿದಾರಿಗೆ ತರುವುದು ಅಸಾಧ್ಯವೆಂದು ಹೇಳಿ ಹೋದರು. ಅವನು ಮಾಡಿದ ಅಪರಾಧಗಳ ಪಟ್ಟಿಯನ್ನು ನೀಡಿದರು. ಸ್ಟಾರ್ ಅದನ್ನು ಮಡಿಚಿ ಕಪಾಟಿನಲ್ಲಿ­ಟ್ಟುಬಿಟ್ಟರು. ಓದಲೂ ಇಲ್ಲ. ‘ನನಗೆ ಈ ಹುಡುಗರು ಹಿಂದೆ ಏನು ಮಾಡಿದ್ದರೆ ಎಂಬುದನ್ನು ತಿಳಿಯುವುದರಲ್ಲಿ ಆಸಕ್ತಿ ಇಲ್ಲ. ನಾನು ಅವರು ಇಂದು ಏನಾಗಿದ್ದಾರೆ ಮತ್ತು ಮುಂದೆ ಏನಾಗಬೇಕು ಎಂಬುದರಲ್ಲಿ ಆಸಕ್ತಿ ವಹಿಸುತ್ತೇನೆ’ ಎನ್ನುತ್ತಿದ್ದರು ಸ್ಟಾರ್.

ಒಮ್ಮೆ ಐವತ್ತು ಮೈಲಿ ದೂರದ ಊರಿಗೆ ಹೋಗಬೇಕಾದಾಗ ಈ ಹೊಸ ತರುಣನನ್ನೇ ಕರೆದುಕೊಂಡು ಹೋದರು.  ಅವನೇ ಕಾರು ನಡೆಸುತ್ತಿದ್ದ. ಸ್ಥಳ ಮುಟ್ಟಿದ ಮೇಲೆ ಅವನ ಕೈಗೆ ಐವತ್ತು ಡಾಲರ್ ಹಣ ಕೊಟ್ಟು, ‘ನಾನು ಮೀಟಿಂಗ್ ಮುಗಿಸಿಕೊಂಡು ಬರುವ ಹೊತ್ತಿಗೆ ಊಟ ಮಾಡಿ ಬಾ. ಸರಿಯಾಗಿ ಎಂಟು ಗಂಟೆಗೆ ಬಂದುಬಿಡು’ ಎಂದು ಹೇಳಿದರು. ಸರಿಯಾಗಿ ಎಂಟು ಗಂಟೆಯಾಗುತ್ತಿದ್ದಂತೆ ತರುಣ ಕಾರು ತಂದ. ಸ್ಟಾರ್ ಕಾರು ಹತ್ತಿ, ಮುಂದೆ ಪ್ರವಾಸ ಸಾಗಿದಾಗ ತರುಣ ಕೇಳಿದ, ‘ಅಂಕಲ್, ನೀವು ನನ್ನನ್ನು ನಂಬುತ್ತೀ­ರಲ್ಲವೇ?’ ‘ಹೌದು, ಖಂಡಿತವಾಗಿಯೂ ನಂಬುತ್ತೇನೆ’ ಎಂದರು ಸ್ಟಾರ್.

‘ಅಂಕಲ್, ಯಾಕೆ ನನ್ನನ್ನು ನಂಬುತ್ತೀರಿ? ಇದುವರೆಗೂ ನನ್ನನ್ನು ನಂಬಿದವರು ನೀವೊಬ್ಬರೇ’. ‘ನಿನ್ನನ್ನು ನಾನು ಎಷ್ಟು ಪ್ರೀತಿಸುತ್ತೇನೆಂದರೆ ನಿನ್ನನ್ನು ನಂಬದೇ ನನಗೆ ಬೇರೆ ದಾರಿಯಿಲ್ಲ’. ‘ಅಂಕಲ್, ನನ್ನನ್ನು ಪೊಲೀಸರು ಯಾಕೆ ಇಲ್ಲಿಗೆ ತಂದು ಬಿಟ್ಟಿದ್ದಾರೆ ಎಂಬುದು ನಿಮಗೆ ಗೊತ್ತಿದೆಯಲ್ಲ?’ ಕೇಳಿದ ತರುಣ. ‘ನಿಜವಾಗಿಯೂ ಇಲ್ಲಪ್ಪ.  ನಾನು ಎಂದಿಗೂ ಅವರು ನೀಡಿದ ಕಾರಣಗಳನ್ನು ನೋಡುವುದಿಲ್ಲ. ಕೇವಲ ಹುಡುಗರನ್ನು ನೋಡುತ್ತೇನೆ’. ತರುಣ ಹೇಳಿದ, ‘ಅಂಕಲ್ ನಾನು ಒಂದು ದಿನ ಕಾಲೇಜು ಮುಗಿಸಿಕೊಂಡು ಬರುವಾಗ ಮನೆಯ ಮುಂದೆ ಜನರ ಗುಂಪು. ಒಳಗೆ ಹೋಗಿ ನೋಡಿದರೆ ನನ್ನ ತಂದೆ ಚೆನ್ನಾಗಿ ಕುಡಿದು ಬಂದು ಮತ್ತಿನಲ್ಲಿ ನನ್ನ ತಾಯಿಯ ಹೊಟ್ಟೆಯಲ್ಲಿ ಚೂರಿಯನ್ನು ಚುಚ್ಚಿ, ಚುಚ್ಚಿ ಕೊಂದುಬಿಟ್ಟಿದ್ದಾರೆ.  ಅವರೀಗ ಜೈಲಿನಲ್ಲಿದ್ದಾರೆ. ನಾನು ಉಡಾಳನಾಗಿ ದರೋಡೆ ಮಾಡಿ ನಾಲ್ಕಾರು ಬಾರಿ ಜೈಲಿಗೆ ಹೋದೆ.

ನಂತರ ಹತ್ತಾರು ಕಾರು ಕಳ್ಳತನ ಮಾಡಿ ಸಿಕ್ಕಿಬಿದ್ದೆ. ಕಾರು ಕಳ್ಳತನ ಮಾಡುವವನ ಕೈಯಲ್ಲಿ ನೀವು ನಂಬಿಗೆಯಿಂದ ನಿಮ್ಮ ಕಾರು ಕೊಟ್ಟಿದ್ದೀರಿ. ವಿಚಿತ್ರವಲ್ಲವೇ?’. ಸ್ಟಾರ್, ಹುಡುಗನ ಭುಜ ತಟ್ಟಿ ಹೇಳಿದ, ‘ನನಗೆ ಅಚಲವಾದ ನಂಬಿಕೆ ಇದೆ. ನೀನು ಇನ್ನೆಂದಿಗೂ ಕಾರು ಕಳ್ಳತನ ಮಾಡಲಾರೆ’. ಹತ್ತು ಜನ ಪೊಲೀಸರು ಹೊಡೆದು, ಬಡಿದು, ಶಿಕ್ಷೆ ನೀಡಿ ಹೇಳಿದಾಗಲೂ ನಾಟದ ಮಾತು, ಮೃದುವಾಗಿ ಬೆನ್ನು ತಟ್ಟಿ ಹೇಳಿದ ಮಾತಿನಿಂದ ನಾಟಿತ್ತು.

ಇದಕ್ಕೆ ಮೂಲ ಕಾರಣವಾದದ್ದು ಸ್ಟಾರ್‌ನ ವ್ಯಕ್ತಿತ್ವ. ಆತ ಹೇಳುವ ಮಾತು ಮನನೀಯ.  ‘ಅಸಂತೋಷ ತುಂಬಿದ ಜಗತ್ತಿನಲ್ಲಿ ನೀವು ಸಂತೋಷವಾಗಿರಬೇಕೆಂದು ಬಯ­ಸುತ್ತೀರಾ? ಹಾಗಾದರೆ ಜನರನ್ನು ದ್ವೇಷಿಸು­ವುದನ್ನು ಬಿಡಿ, ಯಾರನ್ನೂ ದ್ವೇಷಿಸಬೇಡಿ. ಯಾರ ಬಗ್ಗೆಯಾದರೂ ದ್ವೇಷ ಬರುವಂತಿದ್ದರೆ ಅವರಿಂದ ಸ್ವಲ್ಪ ಕಾಲ ದೂರವಿರಿ. ಜನರನ್ನು ಪ್ರೀತಿಸುತ್ತ ಸಾಗಿ, ಅವರಲ್ಲಿ ನಂಬಿಕೆ ಇಡಿ. ಆಗ ನೋಡಿ ನೀವು ಕಲ್ಪನೆ ಮಾಡದಷ್ಟು ನಿಮ್ಮ ಬದುಕು ಸಂತೋಷದಾಯಕ­ವಾಗುತ್ತದೆ’. ಈ ಮಾತು ಪ್ರಯತ್ನ ಯೋಗ್ಯವಾದದ್ದು.

http://www.prajavani.net/columns/ಸಂತೋಷ-ಜೀವನದ-ಸೂತ್ರ

Posted in Moral Stories | Leave a comment

Who is right ???

A teacher teaching Maths to seven-year-old Laiq asked him, “If I give you one apple and one apple and one apple, how many apples will you have?”

Within a few seconds Laiq replied confidently, “Four!”

The dismayed teacher was expecting an effortless correct answer, three. She was disappointed. “Maybe the child did not listen properly.” – she thought.

She repeated, “Laiq, listen carefully. If I give you one apple and one apple and one apple, how many apples will you have?”

Laiq had seen the disappointment on his teacher’s face. He calculated again on his fingers. But within him he was also searching for the answer that will make the teacher happy. His search for the answer was not for the correct one, but the one that will make his teacher happy.

This time hesitatingly he replied, “Four.”

The disappointment stayed on the teacher’s face. She remembered that Laiq liked strawberries.

She thought maybe he doesn’t like apples and that is making him loose focus.

This time with an exaggerated excitement and twinkling in her eyes she asked, “If I give you one strawberry and one strawberry and one strawberry, then how many you will have?”

Seeing the teacher happy, young Laiq calculated on his fingers again. There was no pressure on him, but a little on the teacher. She wanted her new approach to succeed.

With a hesitating smile young Laiq replied, “Three?”

The teacher now had a victorious smile. Her approach had succeeded. She wanted to congratulate herself.

But one last thing remained. Once again she asked him, “Now if I give you one apple and one apple and one more apple how many will you have?”

Promptly Laiq answered, “Four!”

The teacher was aghast. “How Laiq, how?” she demanded in a little stern and irritated voice.

In a voice that was low and hesitating young Laiq replied, “Because I already have one apple in my bag.”

Posted in Inspiration stories | Leave a comment